Gaalipata lyrics

ಹಾಡು: ಮಿಂಚಾಗಿ ನೀನು ಬರಲು....ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ

ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದಾ ವರದಿಗಾರನು
ನಿನ್ನ ಕಂಡ ಕ್ಷಣದಲ್ಲೆ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೆ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ತೆರೆದು ದೋಚಿಕೊಂಡ ನಾ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನುಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ

~*~*~*~*~*~*~*~*~*~*~*~*~*~*~*~*~*~*~*

ಹಾಡು: ನಧೀಮ್ ಧೀಮ್ ತನ ನಧೀಮ್ ಧೀಮ್ ತನ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ
ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದುಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ
ಮಾತೊಂದ ಕೇಳುನೀ ಆಲಿಸಿ
ಹಾಡೊಂದ ಹೇಳುನಿ ಹರಸಿ
ಹಾಡದಿರೊ ಹಾಡದಿರೊ

ನಧೀಮ್ ಧೀಮ್ ತನ
ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಆಡುತ ತೆಲಾಡುತ ಜ್ವರವೇರಿಸು ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ ಕೋಟೆ ದಾಟಿ ಬಂದ ಕಥೆಗೆ
ನಾಯಕ ನೀನೇ ಆ ಚಂದಮಾಮ ಕಥೆಗೆ ನಾಯಕಿ ನಾ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ
ಮೊದಲ ಹೆಜ್ಜೆಗೆ ಎನೊ ಕಂಪನ ಏನೀ ರೋಮಾಂಚನ
ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣಾ ಮೇಲೆ ಕೈಯಾ ಮುಗಿವೆ ಚುಂಬಿಸು ನೀ
ನಾನೆ ನಾಚಿ ನಡುಗೊ ವೇಳೆ ಮಲ್ಲೆ ಹೂವ ಮುಡಿಸೊ ಒಮ್ಮೆ
ನಾನು ಭೂಮಿ ಆವರಿಸು ಸುರಿವ ಮಳೆಯಂತೆ ನನ್ನ

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದುಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ

~*~*~*~*~*~*~*~*~*~*~*~*~*~*~*~*~*~*~*

ಹಾಡು: ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ
ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ
ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪ ಏನು ನಿನ್ನ ಮೂಗುತಿಯೆ
ಸೂರ್ಯದ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯ ತಿನಿಸುವೆಯ
ಹುಟ್ಟೊ ದಿಲ್ಲಿನಲಿ ಮನಸ ತಲುಪೆವೆಯ
ಒ ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ಪ್ರೀತೀಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೆ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರಆಹಾ ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಹೆ ಹೆ ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲಿದು ನಾ ಕನಸಿನ ಕನ್ನಡಿಯ ಕೊಳ್ಳಲೆ
ನಿನ್ನಯ ದಾರಿಯಲಿ ಅಂದಿನ ಹೃದಯದ ಅಂಗಡಿಯ ತೆರೆಯಲೆ

0 comments:

ಗಾ ಳಿ ಪ ಟ ~ G a a l i p a t a

A blog dedicated to the movie G a a l i p a t a - ಗಾಳಿಪಟ